Tuesday 11 August 2015

ಪ್ರಥಮ ರೂಪಣಾತ್ಮಕ - ಪ್ರಶ್ನೆ ಪತ್ರಿಕೆ

ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ, ಬೆಂಗಳೂರು-03.
ಪ್ರಥಮ ರೂಪಣಾತ್ಮಕ ಪರೀಕ್ಷೆ ಜುಲೈ-2015
ಕನ್ನಡ ತೃತೀಯ ಭಾಷೆ
ಹತ್ತನೇ ತರಗತಿ
ಗರಿಷ್ಠ ಕಾಲಾವಧಿ : 45 ನಿಮಿಷಗಳು                                                        ಗರಿಷ್ಠಾಂಕ : 20
ಭಾಗ - `
ಪಠ್ಯಗಳ ಅಧ್ಯಯನ (ಗದ್ಯ, ಪದ್ಯ, ಪೋಷಕ ಅಧ್ಯಯನ) 12 ಅಂಕಗಳು
ಕೆಳಗಿನ ಪ್ರಶ್ನೆಗಳಿಗೆ ಒಂದೊಂದೇ ವಾಕ್ಯದ ಉತ್ತರವನ್ನು ಬರೆಯಿರಿ.                           4x1=4
1) ಚಳಿಯಿಂದ ರಕ್ಷಣೆ ಪಡೆಯಲು ಗೊರೂರರ ಬಳಿಯಿದ್ದ ಉಡುಗೆಗಳಾವುವು?
2)  ಕೂಜನವು ಮನುಜಲೋಕವನ್ನು ಏನನ್ನಾಗಿ ಪರಿವರ್ತಿಸಿದೆ?
3)  ಅಪತ್ಕಾಲೇತು ಸಂಪ್ರಾಪ್ತೇ ಯನ್ಮಿತ್ರಂ ಮಿತ್ರಮೇವ ತತ್'- ಮಾತಿನ ಅರ್ಥವೇನು?
4)  ಕೋಗಿಲೆಯು ಕುಳಿತು ಹಾಡುತ್ತಿದ್ದ ಮಾಮರವು ಹೇಗಿದೆ ಎಂದು ಕಣವಿಯವರು ಹೇಳಿದ್ದಾರೆ?
ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಎರಡು, ಮೂರು ವಾಕ್ಯಗಳ ಉತ್ತರಗಳನ್ನು ಬರೆಯಿರಿ.             2x2=4
5)  ಪೊಲೀಸರು ಗೊರೂರರನ್ನು ಲಾಕಪ್ಪಿನಲ್ಲಿ ಮಲಗುವಂತೆ ಹೇಳಲು ಕಾರಣವೇನು? ವಿವರಿಸಿ
6)  ಕವಿ ಚೆನ್ನವೀರ ಕಣವಿಯವರ ಭಾವನೆಯು ಮೂಕವಾಗಲು ಕಾರಣವಾದ ಸನ್ನಿವೇಶವನ್ನು ವಿವರಿಸಿ.
ಕೆಳಗಿನ ಹೇಳಿಕೆಯನ್ನು ಸಂದರ್ಭ ಮತ್ತು ಸ್ವಾರಸ್ಯ ಸಹಿತ ವಾಕ್ಯಗಳಲ್ಲಿ ವಿವರಿಸಿ.                 1x2=2
7)  “ಈಗ ನೀವು ನನ್ನ ವಶವಾದಿರಿ, ನಾನು ನಿಮ್ಮನ್ನು ಕೈ ಬಿಡುವಂತಿಲ್ಲ
ಅಥವಾ
   ಜಗದ ಬಿನದ ನಿನ್ನ ಮುದದ ಗಾನವಾಯ್ತೆ?”
ಕೆಳಗಿನ ಪದ್ಯಭಾಗವನ್ನು ಪೂರ್ಣಮಾಡಿರಿ.                                               1x2=2
8) ಎದೆ----                                                            ರಸ------
  ------                                                              -----ಒಲುಮೆ
  ------------ ಚಣಾ                     ಅಥವಾ                ಸುಧೆಯ---------
  -----ಕಡಲು                                                          ----ಧ್ಯಾನ
  ಹಿಗ್ಗಿ-----                                                             -------
 --------------ಬಾಜನ                                                -----------ಕೋಗಿಲೆ
ಭಾಗ - `ಬಿ
ಅನ್ವಯಿಕ ವ್ಯಾಕರಣ - 3 ಅಂಕಗಳು
ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ಕೆಳಗೆ ಕೊಟ್ಟಿರುವ ನಾಲ್ಕು ಪರ್ಯಾಯಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ, ಕ್ರಮಾಕ್ಷರದೊಂದಿಗೆ ಉತ್ತರವನ್ನು ಬರೆಯಿರಿ.                  3x1=3
9)  ಕೆಳಗಿನ ಪದಗಳಲ್ಲಿಗಳು ಪ್ರತ್ಯಯ ಸೇರಿ ಬಹುವಚನವಾಗುವ ಪದ :
() ತಾಯಿ (ಬಿ) ಮಗು (ಸಿ) ಹುಡುಗ (ಡಿ) ರಾಜ್ಯ
10) “ಕುಕಿಲ ಕೂಜನ ಸೂಸುವ ಸುಧೆ ಕವಿ ಮನವ ಸೂರೆಗೊಂಡಿತು.” ವಾಕ್ಯದಲ್ಲಿ ಅಮೃತ ಎಂಬ ಅರ್ಥವನ್ನು ಹೊಂದಿರುವ ಪದ:
() ಕುಕಿಲ (ಬಿ) ಸೂಸುವ (ಸಿ) ಸುಧೆ (ಡಿ) ಕೂಜನ
11)  ‘ಬಿನದ ಪದದ ತತ್ಸಮ ರೂಪ:
() ಬಿಯದ (ಬಿ) ವಿನೋದ (ಸಿ) ವಿನದ (ಡಿ) ಬಿರುಸು
ಭಾಗ - `ಸಿ
 ವಾಕ್ಯರಚನೆ ಹಾಗೂ ಬರವಣಿಗೆ ಕೌಶಲ 5 ಅಂಕಗಳು
12) ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.           2x1=2
ಮಾರ್ಚ್ 23, 1931 ವರ್ಷದಲ್ಲಿ ನಮ್ಮ ಭಾರತದ ಯುವ ಕಲಿ ಭಗತ್ ಸಿಂಗ್ ಮತ್ತು ಆತನ ಗೆಳೆಯರಾದ ಸುಖದೇವ್ ಮತ್ತು ರಾಜಗುರು ಅವರುಗಳು ನಮ್ಮ ದೇಶಕ್ಕಾಗಿ ನಗುನಗುತ್ತಾ ತಮ್ಮ ಕೊರಳೊಡ್ಡಿ ನೇಣುಗಂಬಕ್ಕೆ ಏರಿದರು ಎಂಬ ಘಟನೆ ನೆನೆದಾಗಲೆಲ್ಲಾ ಹೃದಯ ತುಂಬಿ ಬರುತ್ತದೆ. ಆಗ ಭಗತ್ ಸಿಂಗರಿಗೆ ಕೇವಲ 23 ವರ್ಷ ಎಂಬುದು ಮತ್ತೂ ಅಚ್ಚರಿ ಮೂಡಿಸುತ್ತದೆ. ವಯಸ್ಸಿನಲ್ಲಿ ಅವರಿಗಿದ್ದ ಅಪಾರ ಹುಮ್ಮಸ್ಸು ವಿಶ್ವದ ಬಗೆಗಿನ ಜ್ಞಾನ, ಓದುವ ಆಸಕ್ತಿ, ದೇಶಭಕ್ತಿ ಇದೆಲ್ಲಾ ನೆನೆದರೆ ಮನಸ್ಸು ಮೂಕವಾಗುತ್ತದೆ.
1. ಭಗತ್ ಸಿಂಗ್ ಗೆಳೆಯರು ಯಾರು?
2. ಯಾವುದನ್ನು ನೆನದರೆ ಮನಸ್ಸು ಮೂಕವಾಗುತ್ತದೆ?
13) ಯಾವುದಾದರೂ ಒಂದು ವಿಷಯವನ್ನು ಕುರಿತು ಕಿರು ಪ್ರಬಂಧ ಬರೆಯಿರಿ.                       1x3=3
ಭ್ರಷ್ಟಾಚಾರ
ರಾಷ್ಟ್ರಪ್ರೇಮ
ನನ್ನ ಹವ್ಯಾಸ
*****************

No comments:

Post a Comment