Saturday 15 August 2015

'ಶಬರಿ' - ಗದ್ಯಭಾಗದ ಪ್ರಶ್ನೆಗಳು

ಶಬರಿ
                                                        -ಪು.ತಿ. ನರಸಿಂಹಾಚಾರ್
1)       ಸೀತೆಯನ್ನು ಕುರಿತು ರಾಮನು ಆಡಿದ ಮಾತುಗಳಾವುವು?
2)     ಸೌಮಿತ್ರಿ ಎಂದರೆಯಾರು?
3)     ಭೂಮಿಜಾತೆ ಎಂದರೆ ಯಾರು?
4)     ಸೀತೆಯನ್ನು ಭೂಮಿಜಾತೆ ಎಂದು ಏಕೆ ಕರೆಯುತ್ತಾರೆ?
5)     ಶ್ರೀರಾಮನ ತಂದೆ ಯಾರು?
6)     ಲಕ್ಷ್ಮಣನ ತಾಯಿ ಯಾರು?
7)     ಸೌಮಿತ್ರಿ ಎಂದು ಯಾರನ್ನು ಕರೆಯುತ್ತಾರೆ?ಏಕೆ?
8)     ಲಕ್ಷ್ಮಣನನ್ನು ಸೌಮಿತ್ರಿಯೆಂದು ಕರೆಯಲು ಕಾರಣವೇನು?
9)     ಲಕ್ಷ್ಮಣನ ಭ್ರಾತೃ ಪ್ರೇಮವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
10)    ಶಬರಿಯು ಶ್ರೀರಾಮನಿಂದ ಏನನ್ನು ಬಯಸಿದಳು?
11)     ಶಬರಿಯು ಯಾವ ನೆಚ್ಚಿನೊಳಿಹೆನೆಂದು ಹೇಳಿದಳು?
12)    ಶಬರಿಯ ಬಯಕೆಯ ಹುಚ್ಚು ಯಾವುದು?
13)    ಶಬರಿಯು ವಾಸವಾಗಿದ್ದ ಆಶ್ರಮಯಾವುದು?
14)    ಶಬರಿಯು ರಾಮನಿಗಾಗಿ ಹೇಗೆ ಹಂಬಲಿಸುತ್ತಿದ್ದಳು?
15)    ಶಬರಿಯು ಶ್ರೀರಾಮನನ್ನು ಹೇಗೆ ಹಾಡಿ ಹೊಗಳಿದ್ದಾಳೆ?
16)    ಶಬರಿಯು ರಾಮಲಕ್ಷ್ಮಣರನ್ನು ಉಪಚರಿಸಿದ ಪರಿಯನ್ನು ವಿವರಿಸಿ.
17)    ಶಬರಿಯು ರಾಮನಿಗಾಗಿ ಮಾಡಿಕೊಂಡಿದ್ದ ಸಿದ್ಧತೆಗಳಾವುವು?
18)    ಶಬರಿಯು ರಾಮನಿಗಾಗಿ ಎಲ್ಲಿ ಕಾಯುತ್ತಿದ್ದಳು?
19)    ಶಬರಿಯು ರಾಮನನ್ನು ಸ್ವಾಗತಿಸಲು ಮಾಡಿಕೊಂಡಿದ್ದ ಸಿದ್ಧತೆಗಳೇನು?ವಿವರಿಸಿ
20)  ಶಬರಿಯು ಯಾರ ನಿರೀಕ್ಷಣೆಯಲ್ಲಿದ್ದಳು?
21)    ಶಬರಿಯು ಮಾಲೆಯನ್ನು ಕಟ್ಟುತ್ತಾ ರಾಮನನ್ನು ಯಾವ ರೀತಿಯಲ್ಲಿ ಹಾಡಿ ಹೊಗಳಿದಳು?
22)  ಶಬರಿಯ ಮುಗ್ಧಭಕ್ತಿಯನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
23)  ಶಬರಿಯ ಭಕ್ತಿಯ ಪರಾಕಾಷ್ಠೆಯನ್ನು ವಿವರಿಸಿರಿ.
24)  ಶಬರಿಯ ತಾಳ್ಮೆಯನ್ನು ಕುರಿತು ಬರೆಯಿರಿ
25)  ಶಬರಿಯು ರಾಮನಿಗಾಗಿ ಹಣ್ಣುಗಳನ್ನು ಯಾವರೀತಿ ಸಿದ್ಧಪಡಿಸಿಟ್ಟಿದ್ದಳು?
26)  ಶಬರಿಯ ಜೀವನದ ಏಕೈಕ ಗುರಿ ಯಾವುದು?
27)  ಶಬರಿಯ ಉತ್ಕಟತೆಯು ಪು.ತಿ.ನ.ರವರ ಗೀತನಾಟಕದಲ್ಲಿ ಹೇಗೆ ವ್ಯಕ್ತವಾಗಿದೆ?
28)  ಶಬರಿಯ ಅತಿಥಿ ಸತ್ಕಾರವನ್ನು ವಿವರಿಸಿರಿ.
29)  ಶಬರಿಗಿದ್ದ ಬಯಕೆಯ ಹುಚ್ಚು ಯಾವುದು?
30)  ಜಟಿಲಕಬರಿ ಯಾರು?
31)    ಶಬರಿಯು ಪರ್ಣಕುಟೀರದೊಳಗೆ ಹೋಗುತ್ತಾ ಆಡಿದ ಮಾತುಗಳಾವುವು?
32)  ಶ್ರೀರಾಮನ ಚಿಂತೆಗೆ ಕಾರಣವೇನು?
33)  ಶ್ರೀರಾಮನು ಗಿರಿವನಗಳನ್ನು ಏನೆಂದು ಪ್ರಾರ್ಥಿಸಿದನು?ಏಕೆ?
34)  ರಾಮನ ಶೋಕದ ತೀವ್ರತೆಯು ಅವನ ಮಾತುಗಳಲ್ಲಿ ಹೇಗೆ ವ್ಯಕ್ತವಾಗಿದೆ?
35)  ಶ್ರೀರಾಮನನ್ನು ಸಂತೈಸಿದವರು ಯಾರು? ಹೇಗೆ?
36)  ಶ್ರೀರಾಮನು ಶಬರಿಯನ್ನು ಹರಸಿದ ಸನ್ನಿವೇಶವನ್ನು ವಿವರಿಸಿರಿ.
37)  ಶ್ರೀರಾಮನು ಶಬರಿಯನ್ನು ಹರಸಿದ ಪರಿಯನ್ನು ವಿವರಿಸಿರಿ.
38)  ರಾಮನು ಸೀತೆಯನ್ನು ಕುರಿತು ಆಡಿದ ಮಾತುಗಳಾವುವು?
39)  “ಸ್ಥೈರ್ಯಕೆಡೆಯಾರು?” ಎಂದು ಲಕ್ಷ್ಮಣನು ಯಾರನ್ನು ಪ್ರಶ್ನಿಸಿದನು? ಏಕೆ?
40)  ರಾಮನು ಯಾರ ನೆನಪಿನ ಸೆಳೆತಕ್ಕೆ ತನ್ನಾತ್ಮ ಸಿಲುಕಿದೆ ಎಂದು ಹೇಳಿದನು?
41)    ರಾಮನು ಗಿರಿವನಗಳನ್ನು ಕುರಿತು ಆಡಿದ ಮಾತುಗಳಾವುವು?
42)  ಲಕ್ಷ್ಮಣನು ರಾಮನನ್ನು ಮರೆಗೆ ಕರೆಯಲು ಕಾರಣವೇನು?
43)  ಲಕ್ಷ್ಮಣನು ತನ್ನನ್ನು ಪಾಪಿಯೆಂದು ಹಳಿದು ಕೊಳ್ಳಲು ಕಾರಣವೇನು?
44)  ಲಕ್ಷ್ಮಣನು ಶ್ರೀರಾಮನನ್ನು ಸಂತೈಸಲು ಕಾರಣವೇನು?
45)  ಲಕ್ಷ್ಮಣನು ಅಣ್ಣನನ್ನು ಹೇಗೆ ಸಂತೈಸಿದನು?
46)  ರಾಮನಿಗಾಗಿ ಕಾತುರದಿಂದ ಕಾಯುತ್ತಿದ್ದ ತಪಸ್ವನಿಯಾರು?
47)  ರಾಮನನ್ನು ಕುರಿತು ಶಬರಿಯು ಆಡಿದ ಮಾತುಗಳಾವುವು?
48)  ರಾಮನ ಸೌಮ್ಯ ಸ್ವಭಾವವನ್ನು ವಿವರಿಸಿರಿ.
49)  ರಾಮನ ಸಾತ್ವಿಕ ಗುಣಗಳನ್ನು ಪಟ್ಟಿಮಾಡಿರಿ.
50)  ರಾಮ ಲಕ್ಷ್ಮಣರು ಭೇಟಿ ನೀಡಿದ ತಾಪಸರ ಬೀಡು ಯಾವುದು?
51)    ರಾಮ ಲಕ್ಷ್ಮಣರನ್ನು ಕಂಡಾಗ ಶಬರಿಗಾದ ಸಂತೋಷವನ್ನು ವಿವರಿಸಿರಿ.
52)  ಶಬರಿಯು ರಾಮ ಲಕ್ಷ್ಮಣರನ್ನು ಉಪಚಾರಗೈದ ರೀತಿಯನ್ನುವಿವರಿಸಿರಿ.
53)  ಮೇಳದವರು ಶಬರಿಯ ಸಡಗರ ಸಂತೋಷವನ್ನು ಹೇಗೆ ವರ್ಣಿಸಿದ್ದಾರೆ?
54)  ಶಬರಿಯ ಬಗೆಗೆ ರಾಮ ಲಕ್ಷ್ಮಣರಿಗೆ ಹೇಳಿದವರು ಯಾರು?
55)  ಮತಂಗಾಶ್ರಮದಲ್ಲಿ ವಾಸವಾಗಿದ್ದ ತಪಸ್ವಿನಿ ಯಾರು?
56)  ಶಬರಿಯು ವಾಸವಾಗಿದ್ದ ಆಶ್ರಮ ಯಾವರೀತಿ ಇತ್ತು?
57)  ಶಬರಿಯು ಹೂ, ಹಣ್ಣು ಮತ್ತು ತಳಿರುಗಳನ್ನು ವಿಂಗಡಿಸುತ್ತಾ ಹಾಡಿದ ಹಾಡಿನ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
58)  ಶಬರಿಯು ತನ್ನ ಅಂತಃಸ್ಸುಖವನ್ನು ವ್ಯಕ್ತಪಡಿಸಿದ ಪರಿಯನ್ನು ವಿವರಿಸಿ.
59)   ಶಬರಿಯು ಮಾಲೆಯನ್ನು ಕಟ್ಟುತ್ತಾ ರಾಮನನ್ನು ಕುರಿತು ಹಾಡಿದ ಹಾಡಿನ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
60)  ಹೂಮಾಲೆ ಕಟ್ಟುತ್ತಾ ಶಬರಿಯು ರಾಮನ ಗುಣಗಾನ ಮಾಡಿದ ಪರಿಯನ್ನು ವಿವರಿಸಿ.
61)    ಶಬರಿಯು ಮಾಡಿದ ಉಪಚಾರವನ್ನು ಮೇಳದವರು ಯಾವರೀತಿ ವರ್ಣಿಸಿದ್ದಾರೆ?
62)  ನಿನಗೆಂದೆಂದಿಗು ಋಣಿ ನಾವು ಎಂದು ಹೇಳಿದವರು ಯಾರು? ಏಕೆ?
63)  ಶಬರಿಯ ಸೊಗದ ಉನ್ಮಾದವನ್ನು ಸ್ವಲ್ಪ ಹದಕ್ಕೆ ತಂದ ರಾಮನ ಮಾತುಗಳಾವುವು?
64)  ಶಬರಿಯು ಉನ್ಮಾದವನ್ನು ಹದಕ್ಕೆ ತಂದುಕೊಂಡು ಆಡಿದ ಮಾತುಗಳಾವುವು?
65)  ‘ಬಡವಿ, ಒಬ್ಬಳೇನಗೈವೆ’ ಎಂಬ ಶಬರಿಯ ನುಡಿಗಳಿಗೆ ರಾಮನ ಪ್ರತಿಕ್ರಿಯೆಯನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
66)  ಶಬರಿಯು ಮುಕ್ತಿಯನ್ನು ಬಯಸಿ ಹಾಡಿದ ನುಡಿಗಳನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
67)  ಶಬರಿಯು ತನಗೆ ಯಾವ ಹರಕೆಯನ್ನು ಇಡುವಂತೆ ರಾಮನನ್ನು ಬೇಡಿದಳು?
68)  ರಾಮನು ಶಬರಿಯ ಅಭೀಷ್ಟವನ್ನು ಈಡೇರಿಸಿದ ಸನ್ನಿವೇಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
69)  ತೇಜಕೆಡೆ ಯಾರು?
70)  ತಾಪಸರ ಬೀಡನ್ನು ನೋಡಿದೊಡನೆಯೇ ರಾಮ ಲಕ್ಷ್ಮಣರಿಗೆ ನೆನಪಿಗೆ ಬಂದುದು ಯಾವುದು?
71)    ಅರಣ್ಯವಾಸಕ್ಕೆ ಹೊರಟ ಶ್ರೀರಾಮನು ಮೊತ್ತಮೊದಲು ಆಶ್ರಮವನ್ನು ಕಟ್ಟಿದ್ದು ಎಲ್ಲಿ?
72)  ಚಿತ್ರಕೂಟ ಎಂದರೇನು? ಅದು ಎಲ್ಲಿದೆ?
73)  ಚಿತ್ರಕೂಟದ ಪಕ್ಕದಲ್ಲಿ ಹರಿಯುವ ನದಿಯಾವುದು?
74)  ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು?
75)  ಉದರಮುಖ ಯಾರು? ಅವನಿಗೆ ಆ ಹೆಸರು ಬರಲು ಕಾರಣವೇನು?
76)  ವಿಶ್ವಾವಸುವಿಗೆ ಶಾಪಕೊಟ್ಟವರು ಯಾರು? ಏಕೆ?
77)   ವಿಶ್ವಾವಸುವು ಉದರಮುಖನಾದುದು ಹೇಗೆ?
78)  ಶಬರಿಯ ಉಪಚಾರವನ್ನು ಮನಸಾರೆ ಹೊಗಳಿದ ರಾಮನ ನುಡಿಗಳನ್ನು ತಿಳಿಸಿರಿ
79)  ಈ ದಿನ ಸುದಿನವೆಂದು ರಾಮನು ಶಬರಿಗೆ ಹೇಳಲು ಕಾರಣವೇನು?
80)  ಶಬರಿಗೆ ಸಿದ್ಧರು ಹೇಳಿದ ಮಾತುಗಳಾವುವು?
81)    ಬಾಳ ಸುತ್ತಿಹ ದೇವ ತೇಜವನ್ನು ಕಾಣುವವರ ಲಕ್ಷಣ ಯಾವುದೆಂದು ರಾಮನು ಲಕ್ಷ್ಮಣನಿಗೆ ಹೇಳಿದನು?
82)  ರಾಮ ಲಕ್ಷ್ಮಣರು ಶಬರಿಯನ್ನು ಕುರಿತು ಆಡಿದ ಮಾತುಗಳಾವುವು?
83)  ಶಬರಿಯ ಕೊನೆಯ ನುಡಿಗಳಾವುವು?
84)  ದನು ಯಾರು?
85)  ದನುವು ರಾಮ ಲಕ್ಷ್ಮಣರಿಗೆ ನೀಡಿದ ಸಲಹೆ ಏನು?
86)  ದಂಡಕಾರಣ್ಯದಲ್ಲಿ ವಾಸವಾಗಿದ್ದ ರಾಕ್ಷಸ ಯಾರು?
87)  ಕಬಂಧನ ಹಿಂದಿನ ಜನ್ಮಯಾವುದು? ಆ ಜನ್ಮದಲ್ಲಿ ಆತನ ಹೆಸರೇನು?
88)  ವಿಶ್ವಾವಸು ಯಾರು? ಈತನು ರಾಕ್ಷಸ ಜನ್ಮತಾಳಲು ಕಾರಣವೇನು?
89)  ಸುಗ್ರೀವನು ಮತಂಗಾಶ್ರಮದಲ್ಲಿ ನೆಲೆಸಲು ಕಾರಣವೇನು?
90)  ಪಂಚಭೂತಗಳು ಯಾವುವು?
91)    ಸೀತೆ ಎಲ್ಲಿದ್ದರದೆ ತವರು ಎಂದು ಲಕ್ಷ್ಮಣನು ಹೇಳಲು ಕಾರಣವೇನು?
92)  ನಂಬಿ ಕೆಟ್ಟವರಿಲ್ಲ ಎಂಬ ಮಾತು ಶಬರಿಗೆ ಚೆನ್ನಾಗಿ ಒಪ್ಪುತ್ತದೆ- ಹೇಳಿಕೆಯನ್ನು ವಿವರಿಸಿರಿ.
93)  ಪು.ತಿ.ನ.ರವರ ಪೂರ್ಣ ಹೆಸರೇನು?
94)  ಪು.ತಿ.ನ.ರವರ ಸ್ಥಳ ಮತ್ತು ಕಾಲವನ್ನು ತಿಳಿಸಿರಿ?
95)  ಪು.ತಿ.ನ.ರವರ ಶಬರಿ ಗೀತನಾಟಕವು ಯಾವ ಕಾವ್ಯವನ್ನು ಆಧರಿಸಿದ ರಚನೆಯಾಗಿದೆ?
96)  ಪು.ತಿ.ನ.ರವರ ಪ್ರಮುಖ ಕೃತಿಗಳಾವುವು?
97)  ಪು.ತಿ.ನ.ರವರ ಅಧ್ಯಕ್ಷತೆ ವಹಿಸಿದ್ದ ಸಮ್ಮೇಳನ ಯಾವುದು?
98)  ಪು.ತಿ.ನ.ರವರಿಗೆ ಸಂದ ಪ್ರಶಸ್ತಿ ಹಾಗೂ ಪುರಸ್ಕಾರಗಳಾವುವು?
99)  ‘ಶಬರಿ’-ಗದ್ಯಭಾಗದ ಆಕರಕೃತಿಯಾವುದು?
100) ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದ ಪು.ತಿ.ನರವರ ಕೃತಿಯಾವುದು?
101)   ಪು.ತಿ.ನ.ರವರಿಗೆ ಪಂಪ ಪ್ರಶಸ್ತಿಯನ್ನು ತಂದುಕೊಟ್ಟ ಕೃತಿ ಯಾವುದು?
102) 53ನೆಯ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಯಾವ ವರ್ಷ? ಎಲ್ಲಿ ನಡೆಯಿತು?
103) ಸಂದರ್ಭಸಹಿತ ಸ್ವಾರಸ್ಯವನ್ನು ವಾಕ್ಯಗಳಲ್ಲಿ ಉತ್ತರಿಸಿರಿ.
1.     ಸೂರ್ಯನೇ ತೇಜಗೆಡೆ ತೇಜಕೆಡೆಯಾರು?”
2.    “ಎನ್ನ ಬಗೆಗನಿವಾರ್ಯವೀ ಶೋಕದುಲ್ಕೆ”
3.    “ಎನ್ನಹಂಕೃತಿಗೆಯೇ ಮನ್ನಣೆಯ ಕೊಟ್ಟೆ”
4.    “ಇದ ನೋಡಿ ಮರುಕೊಳಿಸಿತೆನಗವಳ ಪಾಡು”
5.    “ಪಾಪಿ, ನಾ ಆಕೆಯನು ಒಂಟಿಯೊಲೆ ಬಿಟ್ಟೆ”
6.    “ಉಪಕಾರವಿನಿತಿಲ್ಲ ಈಕೆಗೆನ್ನಿಂದ”
7.    “ಇನ್ನು ನೋಡಿದ ಬಳಿಕ ಏನಪ್ಪಳೋ ವೃದ್ಧೆ!”
8.    “ರೂಪಕೂ ನಾಮ ಮಿಗಿಲಾತ್ಮ ಸುರಭಿಯದು”
9.    “ಮೊದಲ ದಿಟ್ಟಿಗೆ ನೀನು ಬಳಿಕ ನಾನು”
10.   “ನಮ್ಮಯೋಧ್ಯೆಯರಮನೆಯೊಳು ಇದಕು ಲೇಸು ಸಲ್ಲ”
11.    “ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ!”
12.   “ನಿನಗೆ ಸಾವೆ ನಮ್ಮ ಕಾಣ್ಕೆ!”
13.   “ಪೋಗವ್ವಾ ನಿನ್ನಭೀಷ್ಟ ಸಿದ್ಧುಗೆ”
14.   “ಹೆಣ್ಣ ರೀತಿಯನರಿಯಬಹುದೇ”
15.   “ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು”
16.   ನಿನ್ನನು ಜೀವದೊಂದಿಗೆ ಕಾಂಬೆನೇ?
104) ಕೆಳಗಿನ ವಾಕ್ಯಗಳ ಅಲಂಕಾರವನ್ನು ತಿಳಿಸಿ ಸಮನ್ವಯಗೊಳಿಸಿರಿ.
1.     ಆತ್ಮ ಕಾಮಕಲ್ಪಲತೆ
2.    ಶೋಕದುಲ್ಕೆ
3.    ಆತ್ಮ ಸುರಭಿ
4.    ಕೆಟ್ಟ ಕನಸಿನಿರುಳ ಕಳೆವ ಸುಪ್ರಭಾತದಂಥವನು
5.    ನೀ ಬಿಳಿಮುಗಿಲಂತೆ
6.    ನೀ ಹಕ್ಕಿಗಳಂತೆ
7.    ಕಾರ್ಮೋಡವ ಸೆಳೆಮಿಂಚಿನ ತೆರದೊಳು ಭವ ಬಿಡೆ ಬಯಸಿಹೆನು
8.    ಹಸುಳೆಯಂತೆ
105) ಸಂಧಿ ಬಿಡಿಸಿ ಹೆಸರಿಸಿ.
1.     ಕೃಷ್ಣಾಜಿನ
2.    ಕೃಷ್ಣಾಜಿನಾಂಬರೆ
3.    ನೀನಿಹುದೆಲ್ಲೋ
4.    ನಿನ್ನೆಡೆಗೈದು
5.    ಪ್ರಾಣಾಹುತಿ
6.    ಸೆಳೆತಕೆನ್ನಾತ್ಮ
7.    ಬಗೆಗನಿವಾರ್ಯ
8.    ಧೈರ್ಯಗೆಡೆ
9.    ಈಕೆಗೆನ್ನಿಂದ
10.   ಪೂಜೆಯಿಂದ
11.    ನನ್ನನುಜ
12.   ಹಿಂದಿರುಗಿ
13.   ಉಪಚಾರವನ್ನು
14.   ತಂದೆನೆಂದು
15.   ಎನ್ನರಸಿ
16.   ಶ್ರಮಣಿಯಾಶ್ರಮ
17.   ಕೈಯನ್ನು
18.   ಕಂಬನಿ
19.   ಸದ್ಗುಣ
106)  ಈ ಕೆಳಗಿನ ಪದಗಳ ಅರ್ಥವನ್ನು ಬರೆಯಿರಿ.
1.     ಶ್ರಮಣಿ
2.    ಪೆರೆ
3.    ತೇಜ
4.    ಜಾತೆ
5.    ಕಾಮ
6.    ಕಲ್ಪಲತೆ
7.    ನೆಚ್ಚು
8.    ಅರ್ತಿ
9.    ಮಧುಕರ
10.   ಮಧು
11.    ಮಧುಪರ್ಕ
12.   ಕಬರಿ
13.   ಸುರಭಿ
14.   ಅಭೀಷ್ಟ
15.   ಉಲ್ಕೆ
16.   ಉದರ
107) ಕನಿಷ್ಠ ಮೂರು ಪದಗಳಾದರೂ ಇರುವಂತೆ ಸಮಾನಾರ್ಥಕ ಪದಗಳನ್ನು ಬರೆಯಿರಿ.(ಗರಿಷ್ಠಕ್ಕೆ ಮಿತಿಯಿಲ್ಲ)
1.     ರಾಮ
2.    ಸೀತೆ
3.    ಭೂಮಿ
4.    ಹೂ
5.    ಗಿರಿ
6.    ಕಡಲು
7.    ಸೂರ್ಯ
108) ತತ್ಸಮಗಳಿಗೆ ತದ್ಭವ, ತದ್ಭವಗಳಿಗೆ ತತ್ಸಮ ರೂಪವನ್ನು ಬರೆಯಿರಿ.
1.     ಬನ
2.    ಸೀತೆ
3.    ಲತಾ
4.    ಆತ್ಮ
5.    ತಾಪಸ
6.    ತವಸಿ
7.    ದೃಷ್ಟಿ
109) ಕೆಳಗಿನ ಪದಗಳಿಗೆ ವಿರುದ್ಧಾರ್ಥಗಳನ್ನು ಬರೆಯಿರಿ.
1.     ಶೋಕ
2.    ಸುಖ
3.    ಭಯ
4.    ಹಗುರ
5.    ಉಪಕಾರ
6.    ಧೈರ್ಯ
7.    ದಿಟ
8.    ಸುರ
110)   ಈ ಕೆಳಗಿನ ಪದಗಳ ವ್ಯಾಕರಣ ವಿಶೇಷಗಳನ್ನು ತಿಳಿಸಿರಿ.
1.     ಹಣ್ಣು ಹಂಪಲು
2.    ಹಿಗ್ಗಿ ಹಿಗ್ಗಿ
3.    ಬಾ ಬಾ
4.    ಕೋ ಕೋ
5.    ಮರಮರಳಿ



*****************************

4 comments: